8748022728 barayakanyady@gmail.com barayakanyady.blogspot.com

barayakanyady, Ujire, India - 574214

Is this your Business ? Claim this business

Reviews

Overall Rating
5

1 Reviews

5
0%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Barayakanyady in barayakanyady, Ujire


ನಮ್ಮೂರಿನ ಪ್ರೀತಿಯ ಗೆಳೆಯ-ಗೆಳತಿಯರೆ, ಊರಿನ ಮಹನೀಯರೆ, ಅನೇಕ ಕಾರಣಗಲಿಂದ, ಮದುವೆಯಗಿಯೋ , ಅಲ್ಲಾ ಬೆರೆ ಕಡೆ ಜಾಗ ಕರೀದಿ ಮಾಡಿಯೋ, ಕೆಲಸಕ್ಕಾಗಿಯೋ, ವಿಧ್ಯಭ್ಯಾಸಕ್ಕಾಗಿಯೊ ನಮ್ಮೂರಂದ ದೂರ ಆಗಿರಬಹುದು. ನಮ್ಮೂರಿಗೆ ಯಾವತ್ತು ಹೋಗೋದು? ಊರಲ್ಲೆಲ್ಲಾ ಹೇಗಿದ್ದಾರೆ ಯಾವಾಗ ಮಾತಾಡಿಸೋದು? ನಮ್ಮೂರು ಈಗ ಹೇಗಿದೆ? ಇವತ್ತು ಏನೆಲ್ಲಾ ಆಇದೆ ಆಗುತ್ತಿದೆ ಅಂತ ಹಲವು ಗೊಂದಲಗಳ ಪ್ರಶ್ನೆಗಳು ಕೂಡಾ ನಿಮ್ಮಲ್ಲಿ ಕಾಡಿರಬಹುದು... ನೀವೆಲ್ಲೇ ಇದ್ರೂ ನಮ್ಮೊಂದಿಗೆ ಸದಾ ನಗುನಗುತ್ತಾ ಇರಿ, ನಮ್ಮೂರಲ್ಲಿ ಏನಾಗ್ತಾ ಇದೆ ಅನ್ನೋದನ್ನ ಕೂದ ಸದಾ ನೊಡುತ್ತಿರಿ. ನಮ್ಮೂರಿನ ಬಗ್ಗೆ ನಿಮಿಗೇನಾದರೂ ಗೊತ್ತಿದ್ದಲ್ಲಿ ನಮ್ಮ ಇ-ಮೇಲ್ ವಿಳಾಸಕ್ಕೆ ನಿಮ್ಮ ಹೆಸರು ಇ-ಮೇಲ್ ಹಾಗೂ ನಿಮ್ಮ ಫೋನ್ ನಂಬರ್ ಗಳೊಂದಿಗೆ ಕಳುಹಿಸಿಕೊಡಿ, ಇತರ ಮಾಹಿತಿಗಾಗಿ ನೀವು ಪ್ರತೀ ದಿನ ರಾತ್ರಿ ೭ ಗಂಟೆಯಿಂದ ೧೨ ಗಂಟೆಯವರೆಗೂ ನಮ್ಮ ಫೋನ್ ನಂಬರ್ ಕೂಡಾ ಬಳಸಬಹುದು. ಎಂದು ಕೇಳಿಕೊಳ್ಳುತ್ತೇನೆ.


ಬರಾಯ ಕನ್ಯಾಡಿ-I ¤ ಮಾರ್ಗಸೂಚಿ



ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬರಾಯಕನ್ಯಾಡಿ-I ಎಂಬ ಗ್ರಾಮವು 'ಬರಾಯ' ಮತ್ತು ಕನ್ಯಾಡಿ' ಎಂಬ ಎರಡು ಪ್ರದೇಶಗಳಿಂದ ಒಂದುಗೂಡಿದೆ. ಗುರಿಪಳ್ಳ, ದೊಂಪದ ಪಲ್ಕೆ, ಬರಾಯ ಎಂಬ ಪ್ರದೇಶಗಳು ಬರಾಯ ಎಂಬ ಹೆಸರಾಂತ ಪ್ರದೇಶಕ್ಕೆ ಸೇರಿದರೆ, ಕನ್ಯಾಡಿ, ಗೋಲ್ದೊಟ್ಟು, ಎನಿರುಪಲ್ಕೆ(ಎನ್ರಲ್ಕೆ ಎಂದೂ ಕರೆಯುತ್ತಾರೆ)ಗಳು , ಕನ್ಯಾಡಿ ಎಂದೇ ಹೆಸರಾಗಿದೆ.ದೇರ್ಲಕ್ಕಿ, ಪಡ್ಪು, ಈ ೨ಪ್ರದೇಶಗಳು ನಡ ಕನ್ಯಾಡಿ ಎಂದೇ ಪ್ರಸಿದ್ದವಾಗಿದೆ. ಒಟ್ಟಾರೆಯಾಗಿ ಈ ಗ್ರಾಮಕ್ಕೆ ಸುತ್ತಮುತ್ತಲಿನ ಪ್ರದೇಶವನ್ನು ಕೂಡಿಸಿ ಕಜೆ ಕನ್ಯಾಡಿ,ಇಂದಬೆಟ್ಟು ಕನ್ಯಾಡಿ,ಬರಾಯ ಕನ್ಯಾಡಿ, ನಡ ಕನ್ಯಾಡಿ, ಲಾಯಿಲ ಕನ್ಯಾಡಿ ಎಂದು ಅನೇಕ ಹೆಸರಿನಿಂದ ಕರೆಯುತ್ತಾರೆ. ಈ ಪ್ರದೇಶಕ್ಕೆ ಯಾವಕಡೆಯಿಂದ ಬರಲು ಹತ್ತಿರ ಎಂದು ಆ ಹೆಸರುಗಳೇ ತಿಳಿಸುತ್ತದೆ, ಉದಾ: ನಡ ಕನ್ಯಾಡಿಗೆ ಬರಲು ನಡ ಗ್ರಾಮಕ್ಕೆ ಹಾದು ಹೋಗಬಹುದು.
ಬರಾಯ ಕನ್ಯಾಡಿಗೆ ಪ್ರಮುಖ ರಸ್ತೆಗಳು:

¤ ಉಜಿರೆ-(ಕಜೆ-ಕನ್ಯಾಡಿ ಅಡ್ಡ ರಸ್ತೆ,ಶಾಂತಿನಗರ) ಕೊಲ್ಲಿ,
¤ ಉಜಿರೆ-(ಗುರಿಪಳ್ಳ ಕನ್ಯಾಡಿ)ಕೊಲ್ಲಿ
¤ ಬೆಳ್ತಂಗಡಿ-ಕೇಳ್ತಾಜೆ(ನಡಕನ್ಯಾಡಿ)-ಕಾಜೂರು.



ಪಿಲಿಂಗಾಲ್ ಗುಡ್ಡೆ:



ಬರಾಯಕನ್ಯಾಡಿ ಗ್ರಾಮದ ಕನ್ಯಾಡಿ ವಲಯ(ಬೈಲ್)ದಲ್ಲಿ ಒಂದು ಪ್ರಸಿದ್ಧ ಇತಿಹಾಸವಿರುವ ದೊಡ್ಡ ಬೆಟ್ಟವಿದೆ. ಇದನ್ನು 'ಪಿಲಿಂಗಾಲ್ ಗುಡ್ಡೆ' ಎಂದು ಕರೆಯುತ್ತಾರೆ. ತುಳು ಭಾಷೆಯ ಈ ಹೆಸರು ಪಿಲಿ ಮತ್ತು ಆಂಗಾರ್ ಎಂಬ ಎರಡು ಶಬ್ದದಿಂದ ವ್ಯುತ್ಪತಿ ಹೊಂದಿದೆ. ತುಳು ಭಾಷೆಯಲ್ಲಿ ಪಿಲಿ ಅಂದರೆ ಕನ್ನಡದಲ್ಲಿ ಹುಲಿ, ಆಂಗಾರ್(ಆಂಗರುನಾ) ಅಂದರೆ ಕಾಯುವುದು ಎಂದರ್ಥ ಹಾಗೆಯೇ ಗುಡ್ಡೆ ಎಂದರೆ ಕಾಡು, ಬೆಟ್ಟ ಎಂದರ್ಥ. ಅಂದರೆ ಒಟ್ಟಾಗಿ ಈ ಊರನ್ನು ಕಾಯುತ್ತಿದ್ದ ಬೃಹದ್ಧಾಕಾರದ ಪಿಲಿಚಾಮುಂಡಿ ದೈವದ ಹುಲಿಯೊಂದು ವಾಸವಾಗಿತ್ತು. ಆದ್ದರಿಂದ ಆ ಬೆಟ್ಟಕ್ಕೆ ಪಿಲಿಂಗಾರ್ ಗುಡ್ಡೆ ಎಂಬ ಹೆಸರು ಬಂತು ನಂತರ ಕ್ರಮೇಣ ಅದು ಪಿಲಿಂಗಾಲ್ ಗುಡ್ಡೆ ಎಂದು ಬದಲಾಯಿತು.
ಈ ಬೆಟ್ಟವು ಕನ್ಯಾಡಿ ಬೈಲಿನ ಅತೀ ಎತ್ತರದ ಪರ್ವತವಾಗಿದೆ. ವರ್ಷಪೂರ್ತಿ ಅಚ್ಚಹಸಿರಿನಿಂದ ಊರನ್ನು ನೋಡುತ್ತಿದೆ. ನೋಡುವವರಿಗೆ ಅತೀ ಎತ್ತರವಾಗಿ ಇದೊಂದು ಅಚ್ಚರಿಯಂತೆ ಕಾಣಿಸುತ್ತದೆ. ಊರ ಯಾವ ಮೂಲೆಗೆ ಹೋದರೂ ಇದು ಅತೀ ಎತ್ತರದಲ್ಲಿ ಕಾಣಿಸುತ್ತದೆ.

ಈ ಹುಲಿಗೆ ಅದರದ್ದೇ ಆದ ಐತಿಹ್ಯವಿದೆ. ಸು.೨೦೦ ವರ್ಷಗಳ ಹಿಂದೆ ಈ ವಲಯ ಜೈನ ಮನೆತನದ ಕೆಂಪಮಲ್ಲಯ್ಯರವರಿಗೆ ಸೇರಿತ್ತು. ಅವರ ಮನೆ ಈಗ ಅಸ್ತಿತ್ವದಲ್ಲಿರುವ ಅಂಡಿರ್ಮಾರ್ ಮನೆಯ ಹತ್ತಿರವಿರುವ ಊರಿನ ಪಿಲಿಚಾಮುಂಡಿ ದೈವದ ತಾಣದ ಆಗ್ನೇಯ ಭಾಗಲ್ಲಿತ್ತು. ಆ ಮನೆಗೆ "ಸುತ್ತು ಪಡ್ಪುದ ಇಲ್ಲ್" (ಸುತ್ತು ಪಡ್ಪಿನ ಮನೆ) ಎಂದು ಕರೆಯುತ್ತಾರೆ. ಅಂದರೆ ಆ ಮನೆಯು ಸುತ್ತ ಜಗುಲಿಗಳಿಂದ ಕೂಡಿತ್ತು. ಅವರ ಮಾತುಕತೆಗಳೆಲ್ಲ ಅಲ್ಲಿಯೇ ನಡೆಯುತ್ತಿತ್ತು.(೫ ವರ್ಷದ ಹಿಂದೆ ಮೈದಾನ ಅಲೀಕರಣದ ಉದ್ದೇಶದಿಂದ ಅದರ ಪಂಚಾಂಗಲನ್ನು ಕಿತ್ತೆಸೆಯಲಾಗಿದೆ). ಅವರ ಮರಣದ ಕಾಲದ ಬಗ್ಗೆ ಪುರಾವೆಗಳು ದೊರೆತಿಲ್ಲ.. ಆದರೆ ಅವರ ಸಮಾಧಿ (ಗೋರಿ) ಈಗ ಮಾಲ್ದಂಡ ಎಂಬ ಮನೆಯವರಿಗೆ ಸೇರಿದ ಗದ್ದೆಯ ಮದ್ಯದಲ್ಲಿ ಪಿಲಿಚಾಮುಂಡಿ ದೈವಸ್ಥಾನ ಮತ್ತು ಅವರ ಮನೆಯ ಪೂರ್ವಾಭಿಮುಖದಲ್ಲಿದೆ. ಈ ಗದ್ದೆಗೆ "ದೂಪೆದ ಕಂಡ" ಎಂದು ಕರೆಯುತ್ತಾರೆ. ತುಳುವಲ್ಲಿ ದೂಪೆ ಅಂದರೆ ಗೋರಿ ಅಥವಾ ಸಮಾಧಿ ಎಂದರ್ಥ, ಕಂಡ ಅಂದರೆ ಗದ್ದೆ ಎಂದರ್ಥ. ಈ ಗದ್ದೆಗೆ ಯಾವುದೇ ಸೂತಕದವರು, ಮಾಸವೃತ್ತದಲ್ಲಿರುವ ಮಹಿಳೆಯರು ಇಳಿಯುವಂತಿಲ್ಲ ಮಾತ್ರವಲ್ಲ ಅದರ ಬದುವಿನಲ್ಲಿ ಹೋಗುವುದು ಕೂಡಾ ನಿಷಿದ್ಧ. ಅಲ್ಲಿ ಪ್ರವೇಶಿಸಿದವರಿಗೆ ಈಗಾಗಲೇ ಅನೇಕ ಭಾರಿ ನಾಗರ ಹಾವು ಕಾಣಿಸಿದೆ, ಕಾಣಿಸ್ತಲೂ ಇದೆ.

ಕೆಂಪಮಲ್ಲಯ್ಯರವರು ಈ ಊರಿನಲ್ಲಿ ಆಡಳಿತ ನಡೆಸುತ್ತಿರುವಾಗ ಈ ಪಿಲಿಚಾಮುಂಡಿ ದೈವದ ಹುಲಿಯೊಂದಿತ್ತಂತೆ. ಅವರು ಕೆಲವೊಮ್ಮೆ ತನ್ನ ಕೋರ್ಟು ಕಛೇರಿಗಳ ಕೆಲಸಕ್ಕೆ ಹೋಗುಲಾಗ ಆ ಹುಲಿಯಲ್ಲಿ ಮನೆಕಾಯಲು ಹೇಳಿ ಹೋಗುತ್ತಿದ್ದರು. ಅದು ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಅವರ ಕಾಲದಲ್ಲಿ ಪಿಲಿಂಗಾಲ್ ಗುಡ್ಡೆಯ ತುದಿಯಲ್ಲಿ ಒಂದು ದೊಡ್ಡ ದೈವದ ತಾಣವಿತ್ತು. ವರ್ಷದ ಮಾರ್ಚ್ ಎಪ್ರಿಲ್ ತಿಂಗಳಲ್ಲಿ ಅಂಡಿರ್ಮಾರ ತಾಣದಿಂದ ಪಿಲಿಂಗಾಲ್ ಗುಡ್ಡೆ ತಾಣಕ್ಕೆ ದೈವದ ಭಂಡಾರ ಹೋಗುತ್ತಿತ್ತು. ಆಗ ಆ ಹುಲಿಯೂ ಎಲ್ಲರೊಂದಿಗೆ ಹಿಂದಿನಿಂದ ನಡೆದು ಬರುತ್ತಿತ್ತು. ಈ ಹುಲಿ ಯಾರಿಗೂ ಏನೂ ಮಾಡುತ್ತಿರಲಿಲ್ಲ. ಊರನ್ನು ಕಾಯುವುದು ಅದರ ಮುಖ್ಯ ಕರ್ತವ್ಯವಾಗಿತ್ತು.
ಮುಂದೆ ಕೆಲವು ವರ್ಷಗಳ ನಂತರ ಇಬ್ಬರು ಶಿಕಾರಿಯವರಿಂದ ಗಂಡಿಕುಕ್ಕು ಎಂಬಲ್ಲಿ ಆ ಹುಲಿಯು ಬಲಿಯಾಯಿತು. ಈ ಘಟಣೆಯ ಮೂರು ದಿನಗಳ ಬಳಿಕ ಅವರಿಬ್ಬರೂ ಮೈಗೆ ವಿಷವೇರಿ ಮರಣ ಹೊಂದಿದರು.


*ಊರಗೌಡ ಕೆಂಪಮಲ್ಲಯ್ಯ


ಕೆಂಪಮಲ್ಲಯ್ಯರವರು ಒಬ್ಬ ಜೈನ ಆಡಳಿತಗಾರ. ಅವರು ಬರಾಯಕನ್ಯಾಡಿಯ ಆಡಳಿತಗಾರರಾಗಿದ್ದಾಗ ಯಾವುದೋ ಕಾರಣದಿಂದ ಜೈಲುಶಿಕ್ಷೆ ಅನುಭವಿಸುತ್ತಿದ್ದರು. ಅದೊಂದು ದಿನ ರಾತ್ರಿ ಪ್ರತಿವರ್ಷದಂತೆ ನಾಳೆ ನಮ್ಮೂರಿನ ಭೂತಕೋಲದ ದಿನ ಎಂದು ಕನಸು ಬಿತ್ತು. ಆಗ ಅವರು ಪೋಲಿಸರಿಗೆ ವಿಷಯ ತಿಳಿಸಿ ನಾನು ಆ ಊರಿನ ಮಾಲಿಕನಾಗಿರುವುದರಿಂದ ನಾಳೆ ಅಲ್ಲಿಗೆ ಹೋಗಲೇ ಬೇಕು ಇದು ನನ್ನ ಕರ್ತವ್ಯ ಎಂದು ಭಿನ್ನವಿಸಿಕೊಂಡರು. ಅವರ ಕೋರಿಕೆಯಂತೆ ಪಿಲಿಂಗಾಲ್ ಗುಡ್ಡೆ ದೈವಸ್ಥಾನಕ್ಕೆ ಪೋಲಿಸರು ಕರೆತಂದರು. ಅವರು ಬರುವಾಗ ಭೂತ ವಿಧಿವತ್ತಾಗಿ ಅಣಿಯಾಗಿ ನಿಂತು ತೆಂಬರೆ ಹಿಡಿದು ಪಾರ್ದನ ಹೇಳಲು ಆರಂಭಿಸಿತ್ತು. ಇದನ್ನು ಕಂಡು ಕುಪಿತಗೊಂಡ ಕೆಂಪಮಲ್ಲಯ್ಯರವರು "ಇಂಚಿತ್ತಿನ ಸತ್ಯದ ಭೂತ ಮೂಲು ಇತ್ತ್೦ಡ ಎನನ್ ಜೈಲ್ ಗ್ ಪೋವರೆ ಬುಡ್ತ್ವಾ?"
(ಇಂಥ ಸತ್ಯದ ಭೂತ ಇಲ್ಲಿ ಇದ್ದಿದ್ದಿದ್ರೆ ನನ್ನನ್ನು ಜೈಲಿಗೆ ಹೋಗಲು ಬಿಡುತ್ತಿತ್ತಾ?) ಎಂದು ಹೇಳಿ ತನ್ನ ಕಾಲಿನಿಂದ ಒಂದೇ ಸಾರಿ ಮೆಟ್ಟಿದ ರಭಸಕ್ಕೆ ಆ ಭೂತ(ದೈವ) ಮತ್ತು ತೆಂಬರೆಗಳೆಲ್ಲ ಆ ಬೆಟ್ಟದಿಂದ ತುಂಬಾ ಕೆಳಗಿರುವ ಅಂತರ ಎಂಬ ಮನೆಯವರಿಗೆ ಸೇರಿದ ಗದ್ದೆಗೆ ಬಿದ್ದು ಅಲ್ಲಿ ಅದು ಕೆರೆಯ ರೂಪ ತಾಳಿ ಮಾಯವಾಯಿತು. ಆ ಕೆರೆಯೂ ಈಗಲೂ ಇದ್ದು ಮುಕ್ಕಾಲು ಪಾಲು ಹೂಳು ತುಂಬಿದೆ. ಈ ಕೆರೆಯನ್ನು ಯಾರೂ ಕಡಿಯುವುದಿಲ್ಲ. ಅದನ್ನು ಕಡಿದರೆ ಅದ್ರಲ್ಲಿ ರಕ್ತ ಚಿಮ್ಮುತ್ತದೆ ಎಂಬ ದೃಢ ನಂಬಿಕೆ ಇಲ್ಲಿನ ಜನರಿಗಿದೆ. ಕೆಂಪಮಲ್ಲಯ್ಯರವರು ಅವಾಗಲೇ ಭೂತದ ಶಾಪದಿಂದ ಮರಣ ಹೊಂದಿದರು. ಅಲ್ಲಿಂದ ಇಳಿದ ಭೂತ ಮತ್ತೆ ಮೇಲೆ ಹತ್ತದೆ ಅದರ ಕೆಳಗೆ ನೆಲೆಯಾಯಿತು. ಈಗ ಭೂತದ ಭಂಡಾರ ಅಂಡಿರ್ಮಾರ್ ತಾಣದಿಂದ ಇಲ್ಲಿಗೆ ಬಂದ ನಂತರ ಭೂತ ಕೋಲಗಳು ಆರಂಭವಾಗುತ್ತದೆ. ಈ ಊರಲ್ಲಿ ಸುಮಾರು ೪೫ ದೈವಗಳು ನೆಲೆಯಾಗಿವೆ ಎಂದು ಈ ಊರಿನ ಹಿರಿಯರೂ ಹಾಗೂ ಸಾಹಸ ಪಂಚ ಹೋರಾಟಗಾರರಲ್ಲಿ ಒಬ್ಬರಾದ ಅಂಡಿರ್ಮಾರ್ ಬಾಬುಗೌಡರವರು ಅಭಿಪ್ರಾಯಪಡುತ್ತಾರೆ.


Popular Business in ujire By 5ndspot

© 2024 FindSpot. All rights reserved.