Shri Beereshwara Swamy Punya Kshethra Maarehalli Malavalli : Hindu Temple

Shri Beereshwara Swamy Punya Kshethra Maarehalli Malavalli : Hindu Temple

971 0 Hindu Temple

shribeereshwaratemple@gmail.com

Shri Beereshwara Swamy Punya Kshethra Maarehalli, Malavalli, India - 574130

Is this your Business ? Claim this business

Reviews

Overall Rating
0

0 Reviews

5
0%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Shri Beereshwara Swamy Punya Kshethra Maarehalli Malavalli : Hindu Temple in Shri Beereshwara Swamy Punya Kshethra Maarehalli, Malavalli

Originally this place was called Marehalli Maaralaiah (Beereshwara) temple, it has rich history of over 600 years. The History of this place says that, Kuruba is a Hindu caste whose traditional occupation was that of shepherding and farming.Shri Maralaiah (Shri Beereshwara Swamy) worshiped by the Kuruba Gowdas and today all our religious traditions and this philosophy in action is the glory of Marehalli Shri Beereshwara Swamy.

ಕುರುಬರ ಇತಿಹಾಸ

ಕುರುಬ ಜನಾಂಗ ಪುರಾತನವಾದ ಜನಾಂಗ.ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಸಹ ಕುರು ವಂಶ ಮತ್ತು ಯದುವಂಶಗಳ ಪ್ರಸ್ಥ್ತಾವನೆಯಾಗಿದೆ. ಭಾರತ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಚಂದ್ರಗುಪ್ತನು ಕುರಿಗಾಹಿಯಾಗಿದ್ದನು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಆಗಿನ ನಂದ ದೊರೆಗಳ ವಿರುದ್ದ ಸಿಡಿದ್ದೆದ್ದು ತನ್ನದೇ ಸಾಮ್ರಾಜ್ಯವನ್ನು ಚಾಣಾಕ್ಯನ ಸಹಾಯದಿಂದ ಕಟ್ಟಿದನು. ಇದರ ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯ ಪಾರ್ಲಿಮೆಂಟ್ ಕಟ್ಟಡದ 5ನೇ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ ಅದರ ಕೆಳಗೆ ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತ್ತಿರುವುದು ಎಂದು ಬರೆಯಲಾಗಿದೆ.

ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕರಾಯರು ಕುರುಬಜನಾಂಗದವರು, ಮೊದಲಿಗೆ ಹಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್‍ರ್‍ನು ವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆÀಗೆ ಮಣಿಯದೆ ಮಲ್ಲಿಕಾಪ್‍ರ್‍ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಸಾದು ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು.ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕÀದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬಜನಾಂಗದವರು ಕಡೆÀಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ,ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು,ವೀರಪುತ್ರರೆಂದು,ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು.ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು,ವೈಷಮ್ಯವನ್ನು,ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನಹರಿಸದೆ ಈ ಜನಾಂಗದ ಪುರಾಣ,ಇತಿಹಾಸ, ಜ್ಞಾನ,ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು.

ಕರುಬ ಜನಾಂಗದವರು ತಮ್ಮ ಸಂಸ್ಕøತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕುಲ,ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ. ಹೀಗೆ ಹರಿದು ಹಂಚಿ ಹೋದ ತಮ್ಮ ಜನಾಂಗದ “ ಕುರುಬ ” ಎಂಬ ಹೆಸರು, ಆಯಾ ಪ್ರದೇಶಗಳ ಭಾಷೆಗೆ ತಕ್ಕಂತೆ ಬದಲಾಗುತ್ತಾ ಹೋಗಿದೆ. ಹಾಗೂ ಕಾಲಕ್ಕನುಗುಣವಾಗಿ ಬಂದ ಬೇರೇ ಬೇರೇ ಧರ್ಮಗಳ ಪ್ರಭಾವ ಹಾಗೂ ವಿವಿಧ ವಿದ್ಯಮಾನಗಳಿಗೆ ಅನುಗುಣವಾಗಿ “ ಕುರುಬ ” ಪದದ ಜೊತೆಗೆ ಇತರ ಪದಗಳು ಸೇರಿಕೊಂಡಿವೆ.

ಪ್ರಾಚೀನಕಾಲದಿಂದಲೂ ಕುರಿಸಾಕಾಣಿಕೆ,ಕಂಬಳಿ ತಯಾರಿಕೆಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದ ಕಾರಣದಿಂದ ಅಲೆಮಾರಿತನವನ್ನು ಮೈಗೂಡಿಸಿಕೊಂಡು, ಒಂದೆಡೆ ನೆಲೆನಿಂತು ನೆಮ್ಮದಿಯ ಸುಖ ಜೀವನಕ್ಕೆ, ಸಂಪಾದನೆಗೆ, ಆರಾಮದಾಯಕವಾದ ಜೀವನಕ್ರಮಕ್ಕೆ ಒಡ್ಡಿಕೊಳ್ಳದೆ, ಸರಳವಾದ ಮಿತ ಆಸೆ ಆಕಾಂಕ್ಷೆಗಳ ವರ್ತುಲದಲ್ಲಿ ತಮ್ಮನ್ನು ತಾವೇ ಬಂಧಿಸಿಕೊಂಡು ನಡೆಸುತ್ತಿದ್ದ ಜೀವನಕ್ರಮಕ್ಕೆ ಶಿಕ್ಷಣವೂ ಅಗತ್ಯವೆಂಬುದನ್ನು ಗಂಭೀರವಾಗಿ ಪರಿಗಣಿಸದ ಮತ್ತು ಒಂದು ವೃತ್ತಿ ಹಾಗೂ ಸಮುದಾಯಕ್ಕೆ ಸೇರಿರುವ ನಾವೆಲ್ಲರೂ ವಿಚಾರ ವಿನಿಮಯಕ್ಕಾಗಿ ಕಷ್ಟ, ಸುಖ-ದುಖಃಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಂದೆಡೆ ಸೇರಬೇಕು ಒಂದುಗೂಡಬೇಕು ಏಂಬ ಪರಿಕಲ್ಪನೆಯೇ ಇರದಿದ್ದ ಕಾರಣದಿಂದಾಗಿ ತಮ್ಮ ತಮ್ಮ ಮೂಲಗಳನ್ನು ಹುಡುಕಿಕೊಳ್ಳುವ, ಅದರಿಂದ ಅಸ್ಮಿತ ಅಭಿಮಾನವನ್ನು ರೂಢಿಸಿಕೊಳ್ಳುವ ತಮ್ಮ ಹಿರಿಮೆ ಗರಿಮೆ ಕಲಾವಂತಿಕೆ ವೈಶಿಷ್ಟ್ಯಗಳನ್ನು ಲೋಕ್ಕಕ್ಕೆ ಪರಿಚಯಿಸುವ ಪ್ರಯತ್ನವನ್ನು ನಮ್ಮ ಪೂರ್ವಿಕರು (ಜನಾಂಗ) ಮಾಡಲಿಲ್ಲ.

ಚಾರಿತ್ರಿಕವಾಗಿ ಮತ್ತು ಸಾಂಸ್ಕøತಿಕವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಪಾತ್ರವನ್ನು ಹೊಂದಿರುವ ಕುರುಬ ಜನಸಮುದಾಯದವರನ್ನು ಹಾಲುಮತದ ಸಂಪ್ರದಾಯದವರೆಂದು ಕರೆಯುತ್ತಾರೆ.

ಕುರುಬ ಜನಾಂಗದವರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿಕೊಂಡು ಬಂದವರು, ಕಲ್ಲ್ಲಿನ ಶಿಲೆಯನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ,ಅದೇ ಸಂಸ್ಕøತಿ ಮುಂದೆ ಶಿವಲಿಂಗ ಪೂಜೆಯಾಗೆ ಮಾರ್ಪಟ್ಟಿತು. ಪ್ರಾಚೀನಕಾಲದಿಂದಲೂ ನಮ್ಮ ಜನಾಂಗದವರು ತಮ್ಮ ಮೂಲಗುರುವೆಂದು ಆರಾದಿಸಿಕೊಂಡು ಬಂದಿರುವ ಶ್ರೀಜಗದ್ಗುರು ರೇವಣಸಿದ್ದರಿಗೆ ಅಗ್ರಸ್ಥಾನವನ್ನು ನೀಡುತ್ತಾರೆ. ಕುರುಬ ಜನಾಂಗದವರಾದ ನಾವು ಶಿವನನ್ನು ಬೀರೆಶ್ವರ,ಮೈಲಾರಲಿಂಗ, ಮಾದೇಶ್ವರ,ಮಲ್ಲಪ್ಪ, ಮಲ್ಲಿಕಾರ್ಜುನ, ಮುಂತಾದ ಹೆಸರಿನಲ್ಲಿ ಪೂಜಿಸುತ್ತೆವೆ.ಎಲ್ಲಮ್ಮ, ಭೀಮವ್ವ, ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತೇವೆ. ಕರ್ನಾಟಕ ಮತ್ತು ಆಂದ್ರಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯಗಳಿರುತ್ತದೆ ಹಾಗೂ ಈ ದೇವಾಲಯದ ಪೂಜಾರಿಗಳು (ಅರ್ಚಕರು)ಕುರುಬ ಜನಾಂಗದವರೇ ಆಗಿರುತ್ತಾರೆ.

ಕುರುಬ ಸಮುದಾಯದಲ್ಲಿ ಸಿಗುವ ಎರಡು ಪ್ರಧಾನ ಸಂಪ್ರದಾಯವೆಂದರೆ, ಒಂದು ಹತ್ತಿಕಂಕಣ ಮತ್ತೊಂದು ಉಣ್ಣೆ ಕಂಕಣ ಯಾವುದೇ ಕ್ರಮಬದ್ದ ಹಾಗೂ ಸಮಾಜಕ್ಕೆ ಉಪಯುಕ್ತವಾಗುವ ಅಲ್ಲದೆ ಮಾನವನಿಗೆ ಮಂಗಳಕರವೆನಿಸುವ ಸಂದರ್ಭದಲ್ಲಿ ನಾವು ಇಚ್ಛಾಶಕ್ತಿಯನ್ನು ತೊಡುತ್ತೇವೆ. ಆ ಇಚ್ಛಾಶಕ್ತಿಯು ಕಂಕಣಬದ್ದವಾಗಿರಬೇಕೆಂದು ಆಶಿಸುತ್ತೇವೆ, ಅದಕ್ಕೆ ಸಾಂಕೇತಿಕವಾಗಿ ಅನಾದಿ ಕಾಲದಿಂದಲೂ ನಮ್ಮ ಸಮುದಾಯದವರು ಕಂಕಣವನ್ನು ಕಟ್ಟುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ.

ನಾವು ನಮ್ಮ ಸಂಸ್ಕøತಿಯ ಮೂಲ ಸೊಗಡನ್ನು,ಪರಂಪರಾಗತ ಜೀವನ ಪದ್ದತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದಿದ್ದೇವೆ. ಅದೇ ರೀತಿಯಲ್ಲಿ ಮುಂದುವರೆಸುತ್ತಾ ಸಮಸ್ತ ಕುಲಭಾಂದವರೆಲ್ಲರು ಒಂದುಗೂಡಿ ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಮತ್ತೆ ಮರುಕಳಿಸುವತ್ತ ದಿಟ್ಟಹೆಜ್ಜೆಯನ್ನು ಹಾಕೋಣ.

About Kuruba Samaja


Kuruba community is one of the oldest community in India. During the Ramayana and Mahabharata era too there is a mention about Kuruba community. Chandra Gupta Maurya who built the Maurya dynasty, which is known to be the first dynasty in Indian history, is also a Kuruba. Hakka-Bukka, founders of Vijayanagara dynasty, is also from the Kuruba community. The era ruled by the Vijayanagara dynasty has been termed as the Golden Era of Karnataka history.

The Kuruba community's prominence declined after the rule of Vijayanagara dynasty when new developments took place both politically and economically.

During the British rule, Holkar and Sangolli Rayanna, both Kuruba’s, started to revolt against the Britishers by uniting and bonding people together in one voice. The British, seeing this upcoming revolt, subdued the Kuruba community.

In North Karnataka, the Muslim community which had a negative trait towards the Kurubas during the Vijayanagar dynasty rule also suppressed the Kuruba community. Therefore due to all the above reasons the Kuruba community had to flee the land in which they where born, though the Kurubas had to leave their mother land and seek shelter in various parts of India, they up kept their traditional, religious and professional ethics and values during the past centuries. During this transition, the Kuruba community adapted and learnt the tradition and culture of the land to which they had migrated. The Kurubas became a part of that community and were know in various other sub communities.

Therefore due to the above facts and reasons wherein our Kuruba community people is spread in and around India and the globe, Kuruba Samaja’s main aim through this website is to support combination of all the Kuruba community in India and abroad. This Kuruba Samaja website provides a platform to share thoughts, ideas and activities; to create a bond among all Kuruba's by bringing us all together and also to empower them to reach new heights, by trying to bring back, at least, our lost glory during the Vijayanagar era. Our mission is to bring all the Kuruba people together through this website and also provide a support for the betterment of economical and social conditions of the Kuruba community. So let us all, Kurubas, come together as a family to support and built a strong and united Kuruba Samaja community.

1.Shri Shivanna-President
2.Shri Chikka Swaamy - Secretary
3.Shri Naagaiah - Joint Secretary
4.Shri Doddaiah -Fonder Trustee
5.Shri Channaiah -Fonder Trustee
6.Shri Chikkamaadhu -Fonder Trustee
7.Shri Raama -Fonder Trustee
8.Shri Naagaiah -Fonder Trustee
9.Shri Doddaveeraiah -Fonder Trustee
10.Shri Mariherappa -Fonder Trustee
11.Shri Chandrashekarappa -Fonder Trustee
12.Shri Chikkachannaiah -Fonder Trustee
13.Shri Umashankar ML -Fonder Trustee
14.Shri Jagdeesh M -Fonder Trustee
15.Shri Nagaraju H -Fonder Trustee
© 2024 FindSpot. All rights reserved.