+915254252315 beeji2001@gmail.com byndoor.com

Near Janata Wines, Byndoor, India - 576214

Is this your Business ? Claim this business

Reviews

Overall Rating
4

8 Reviews

5
0%
4
75%
3
13%
2
13%
1
0%

Write Review

150 / 250 Characters left


Questions & Answers

150 / 250 Characters left


About Byndoor.com in Near Janata Wines, Byndoor

ಶ್ರೀ ಮೊಕಾಂಬಿಕೆಯ ಕ್ಶೇತ್ರದ ಸನಿಹದಲ್ಲಿರುವ ಪುಟ್ಟ ಊರು ಬೈಂದೂರು. ಚಾಲುಕ್ಯರ ಕಾಲದ ಐತಿಹಾಸಿಕ ಶ್ರೀ ಸೇನೇಶ್ವರ ದೇವಸ್ಥಾನ, ಸುಂದರವಾದ ಕಡಲ ತೀರ,ಬೆಟ್ಟದ ತುದಿಯಲ್ಲಿ ವಿಹಂಗಮ ನೋಟಕ್ಕೊಂದು ಆಸ್ಪದವೆಂಬಂತೆ ನಿಂತ ಬೈಂದೊರು ಚರ್ಚ್, ಕೆಳ ಪೇಟೆಯಲ್ಲಿರುವ ಬ್ರಹತ್ ಮಸೀದಿ, ಒತ್ತಿನೆಣೆಯಲ್ಲಿ ಸ್ಥಾಪಿತಗೊಂಡ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಗಳು, ಉತ್ತರಕ್ಕೆ ನಡೆದರೆ ನೇತ್ರಾಣಿ ಗುಡ್ದ, ದಕ್ಶಿಣಕ್ಕೆ ಚಲಿಸಿದರೆ ಮರವಂತೆ ಸಮುದ್ರ ತೀರ. ಇಂತಹ ಊರು ಹಿಂದಿನ ರಾಜರ ಕಾಲದ ಆಳ್ವಿಕೆಯ ಬಿಂದುಪುರ ಅಂತೆಯೇ ಈಗಿನ ಕುಂದಾಪುರ ತಾಲೂಕಿನ ತಾಲೂಕು ಕೇಂದ್ರವಾಗಲು ತುದಿಕಾಲಲ್ಲಿ ನಿಂತಿರುವ ಬೈಂದೂರು.

ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದು ಜೀವನ ನಡೆಸಿ, ಜೀವ ಸವೆಸಿ ಗತಿಸಿದ ಜೀವಗಳು ಅದೆಷ್ಟೋ. ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಸಮುದಾಯಗಳ ನಡುವೆ ಯಾವುದೇ ಗೊಂದಲವಿಲ್ಲದೆ, ದೇಶ ವಿದೇಶಗಳಲ್ಲಿ ನೆಲೆ ನಿಂತ ಬೈಂದೂರಿನ ಜನತೆ ಹಳೆಯ ಸ್ನೇಹಿತರೊಡನೆ ಒಂದೇ ಸೊರಿನಡಿ ವಿಚಾರ ವಿನಿಮಯಗಳ ಮೊಲಕ ಸಂತೋಷ ಸಂಭ್ರಮವನ್ನು ಹಂಚಿಕೊಳ್ಳುವ ಉದ್ದೇಶದಿಂದ ಸ್ಥಾಪನೆಗೊಳ್ಳುತ್ತಿರುವ ಅಂತರ್ಜಾಲ ತಾಣವೇ ಬೈಂದೂರು ಡಾಟ್ ಕಾಮ್.

ಇಂತಹ ಪರಿಕಲ್ಪನೆಯ ಮೊಲಕ ಈಗಾಗಲೇ ತನ್ನ ಸುದ್ದಿ ತಾಣ ಗಲ್ಪ್ ವಾರ್ತೆ ಡಾಟ್ ಕಾಮ್, ಗಲ್ಪ್ ಕನ್ನಡಿಗ ಡಾಟ್ ಕಾಮ್ ಮತ್ತು ಇತರ ಸಮುದಾಯಗಳ ಸರಣಿ ಅಂತರ್ಜಾಲ ಕೇಂದ್ರವನ್ನು ಸ್ಥಾಪಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಜಿ. ಮೊಹದಾಸ್ ರವರು ಇದರ ಸ್ಥಾಪನೆಯ ಕನಸನ್ನು ಹೊತ್ತು ದೂರದ ದುಬೈಯಿಂದ ಬಂದು ತನ್ನ ಹುಟ್ಟೂರು ಬಿಜೂರಿನ ಕೇಂದ್ರ ಬೈಂದೂರಿನ ಮೇಲಿನ ಪ್ರೀತಿಗೋಸ್ಕರವಾಗಿ ಇದೇ ನವೆಂಬರ್ 27, 2011ನೇ ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಬೈಂದೂರಿನ ರೋಟರಿ ಭವನದಲ್ಲಿ ಉದ್ಘಾಟಣೆಗೊಂಡಿತ್ತು.

~ ಬೀಜಿ (ಬಿ.ಜಿ.ಮೋಹನ್ ದಾಸ್)
© 2024 5ndspot. All rights reserved.