918314203065 news.kannadamma@gmail.com kannadamma.net

MG Towers, Club Road, Belgaum, India - 590001

Is this your Business ? Claim this business

Reviews

Overall Rating
4

215 Reviews

5
4%
4
80%
3
5%
2
6%
1
5%

Write Review

150 / 250 Characters left


Questions & Answers

150 / 250 Characters left


About Kannadamma in MG Towers, Club Road, Belgaum

70ರ ದಶಕದಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಪ್ರಾಬಲ್ಯ ತುಂಬಿ ತುಳುಕುತ್ತಿರುವ ಸಮಯದಲ್ಲಿ ಕನ್ನಡ ಭಾಷೆಗೆ ಶಕ್ತಿ ತುಂಬಿ ಗಡಿನಾಡಿನಲ್ಲಿ ಕನ್ನಡದ ಧ್ವಜ ಆಕಾಶದ ಎತ್ತರಕ್ಕೆ ಹಾರಬೇಕು ಎಂಬ ದೃಷ್ಟಿಯಿಂದ ಹುಟ್ಟು ಕನ್ನಡದ ಹೋರಾಟಗಾರರಾದ ದಿವಂಗತ ಎಂ.ಎಸ್.ಟೋಪಣ್ಣವರ 21-2-1974 ರಂದು ಚಿಕ್ಕ ಆಕಾರದ ಕನ್ನಡಮ್ಮ ದಿನಪತ್ರಿಕೆಯನ್ನು ಹುಟ್ಟುಹಾಕಿದರು.

ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಲು ಹಗಲು ರಾತ್ರಿ ಶ್ರಮಿಸಿದರು. ಅದರ ಪರಿಣಾಮವಾಗಿ ಚಿಕ್ಕ ಆಕಾರದಲ್ಲಿದ್ದ ಪತ್ರಿಕೆ ದೊಡ್ಡ ಆಕಾರವನ್ನು ಪಡೆದುಕೊಂಡಿತು. ಆರಂಭದಲ್ಲಿ ನಾಲ್ಕು ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆ ಎಂಟು ಪುಟದ ವಿಸ್ತಾರವನ್ನು ಪಡೆದುಕೊಂಡಿತು. ಕಪ್ಪು ಬಿಳುಪು ಮುದ್ರಣದಲ್ಲಿ ಮುದ್ರಿತವಾಗುತ್ತಿದ್ದ ಪತ್ರಿಕೆ ಈಗ ಮುಖಪುಟ ಹಾಗೂ ಕೊನೆಯ ಪುಟಗಳಲ್ಲಿ ಬಣ್ಣದ ಮುದ್ರಣದ ಮೂಲಕ ಸರ್ವಾಂಗ ಸುಂದರವಾಗಿ ಪ್ರಕಟಗೊಳ್ಳತೊಡಿಗದೆ.

ಉತ್ತರ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಗಿಂತ ಮೊದಲು ಕಂಪ್ಯೂಟರ್ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಇದರ ಜೊತೆಗೆ ಸ್ವಂತ ಮುದ್ರಣಾಲಯ ಹಾಗೂ ಸ್ವಂತ ವಾಹನಗಳನ್ನು ಹೊಂದಿ ಉತ್ತರ ಕರ್ನಾಟಕದ ಎಲ್ಲ ಕಡೆಗೆ ಪ್ರಸಾರವನ್ನು ಪಡೆದು ಅಗ್ರಮಾನ್ಯ ಪತ್ರಿಕೆಗಳಲ್ಲಿ ಒಂದಾಗಿ ಕನ್ನಡಮ್ಮ ಪತ್ರಿಕೆ ಬೆಳೆದುನಿಂತಿದೆ.

ಇದೀಗ ತಾಲೂಕಾ ಮಟ್ಟದ ಎಲ್ಲ ವರದಿಗಾರರಿಗೆ ಕಂಪ್ಯೂಟರ ನೀಡಿರುವ ಪತ್ರಿಕೆ ಸುದ್ದಿಗಳನ್ನು ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದೆ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಏಜೆಂಟರ ಮತ್ತು ವರದಿಗಾರರ ಜಾಲವನ್ನು ಹೊಂದಿದೆ.

ನೂರಾರು ಪತ್ರಕರ್ತರಿಗೆ ತರಬೇತಿ ನೀಡಿ ಅವರು ಪತ್ರಿಕಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮದಾಗಿದೆ. ನಮ್ಮ ಪತ್ರಿಕೆಯಲ್ಲಿ ತರಬೇತಿ ಪಡೆದವರು ಇಂದು ನಾಡಿನ ಎಲ್ಲ ಪತ್ರಿಕಾ ಕಚೇರಿಗಳಲ್ಲಿ ಕಾರ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಇದೀಗ ಅಂತರ್ಜಾಲವನ್ನು ಪ್ರವೇಶಿಸಿರುವ ಪತ್ರಿಕೆ ತನ್ನದೇ ಆದ ಡಾಟ್ಕಾಮ್ ಹೊಂದಿ ಜನರು ಇಂಟರ್ನೆಟ್ದಲ್ಲಿ ಪತ್ರಿಕೆಯ ಸುದ್ದಿಗಳನ್ನು ಓದುವಂತೆ ಮಾಡಲಾಗಿದೆ. ಈಗ ಸಂಪಾದಕರಾಗಿರುವ ಶ್ರೀಮತಿ ಉಮಾದೇವಿ ಟೋಪಣ್ಣವರ, ವ್ಯವಸ್ಥಾಪಕ ಸಂಪಾದಕರಾಗಿರುವ ರಾಜೀವ ಟೋಪಣ್ಣವರ ಪತ್ರಿಕೆಯ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತ್ರಿಕೆಯ ವಿಸ್ತಾರವಾದ ಸೇವೆಯನ್ನು ಗಮನಿಸಿ ನಮ್ಮ ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆ ಎಂಬ ಸ್ಥಾನಮಾನವನ್ನು ನೀಡಿ ಗೌರವಿಸಿದೆ. ನಮ್ಮ ಪತ್ರಿಕೆಯ ಪುಟ ವಿನ್ಯಾಸಕ್ಕಾಗಿ ಮೈಸೂರಿನ ಆಂದೋಲನ ಪತ್ರಿಕೆ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಯನ್ನು ನಮ್ಮ ಪತ್ರಿಕೆ ಪಡೆದುಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ.

Popular Business in belgaum By 5ndspot

© 2024 FindSpot. All rights reserved.